eng
competition

Text Practice Mode

Kannada Typing Challenge

created Aug 25th 2022, 14:16 by Mohan Shetty


0


Rating

198 words
1 completed
00:00
"ಅಹಂಕಾರಕ್ಕೆ ಬೆಲೆ ಇಲ್ಲ ಹಾಗಾಗಿ ವಿನಯವಂತರಾಗಿ.."
 
ನಾನು ನನ್ನ ವೃತ್ತಿ ಜೀವನದ ಉತ್ತುಂಗದಲ್ಲಿರುವಾಗ ಒಮ್ಮೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆ. ನನ್ನ ಪಕ್ಕದ ಸೀಟಿನಲ್ಲಿ ಒಬ್ಬ ಸರಳ ಸಜ್ಜನ ವ್ಯಕ್ತಿ ಕುಳಿತುಕೊಂಡಿದ್ದರು. ಸರಳವಾದ ಶರ್ಟ್ ಮತ್ತು ಪ್ಯಾಂಟನ್ನು ಧರಿಸಿದರು. ನೋಡಿದರೆ ಮಧ್ಯಮ ವರ್ಗದವರು ಹಾಗೂ ತುಂಬಾ ವಿದ್ಯಾವಂತರಂತೆ ಕಾಣುತ್ತಿದ್ದರು.
 
ವಿಮಾನದಲ್ಲಿದ್ದ ಇತರ ಪ್ರಯಾಣಿಕರು ನಾನು ಯಾರೆಂದು ನನ್ನನ್ನು ಗುರುತಿಸಿದರು. ಆದರೆ ಸಜ್ಜನ ವ್ಯಕ್ತಿ ನನ್ನನ್ನು ಗುರುತಿಸದೇ ತನ್ನ ಪಾಡಿಗೆ ತಾನಷ್ಟೇ ಶಾಂತವಾಗಿ ಕಿಟಕಿಯಿಂದ ಹೊರಗೆ ನೋಡುತ್ತಾ ಪತ್ರಿಕೆ ಓದುತ್ತಾ ಕುಳಿತುಕೊಂಡರು. ನಾನು ಯಾರೆಂದು ಅವರಿಗೆ ಗೊತ್ತೆ ಆಗಲಿಲ್ಲ. ತಿಳಿದುಕೊಳ್ಳಲು ಅವರು ಇಷ್ಟ ಪಡಲಿಲ್ಲ.
 
ಎಲ್ಲರು ನನ್ನನ್ನು ಗುರುತಿಸಿದ್ದಾರೆ ಆದರೆ ವ್ಯಕ್ತಿಗೆ ನಾನು ಯಾರೆಂದು ಗೊತ್ತಾಗಲಿಲ್ಲವೆ ಎಂಬ ಕೂತುಹಲದಿಂದ ನಾನು ಅವರನ್ನು ಮಾತನಾಡಲು ಪ್ರಯತ್ನಿಸಿದೆ. ಅವರು ನನ್ನತ್ತ ನೋಡಿ ನಯವಾಗಿ ನಗುತ್ತಾ 'ಹಲೋ' ಎಂದು ಹೇಳಿದರು. ನಮ್ಮ ಸಂಭಾಷಣೆ ಪ್ರಾರಂಭವಾಯಿತು. ನಾನು ಸಿನಿಮಾ ಮತ್ತು ಚಲನಚಿತ್ರಗಳ ವಿಷಯವನ್ನು ಕೈಗೆತ್ತಿಕೊಂಡೆ ಹಾಗೂ ನೀವು ಸಿನಿಮಾ ನೋಡುತ್ತೀರಾ..? ಎಂದು ಕೇಳಿದೆ
 
ವ್ಯಕ್ತಿ ಉತ್ತರಿಸುತ್ತಾ "ಓಹ್. ಬಹಳ ಕಡಿಮೆ ಹಲವು ವರ್ಷಗಳ ಹಿಂದೆ ಒಂದು ಸಿನಿಮಾ ನೋಡಿದ್ದೆ ಎಂದು ಹೇಳಿದರು."
 
ನಾನು ನನ್ನ ಪರಿಚಯ ಹೇಳುತ್ತಾ 'ನಾನು ಚಿತ್ರರಂಗದಲ್ಲಿಯೇ ಕೆಲಸ ಮಾಡುತ್ತೇನೆ ನಾನೊಬ್ಬ ನಟ ಎಂದು ಹೇಳಿದೆ'
 
ವ್ಯಕ್ತಿ ತಲೆಯಾಡಿಸುತ್ತಾ, "ಓಹ್ ಅದ್ಭುತ..! ತುಂಬಾ ಖುಷಿಯ ಸಂಗತಿ ಎಂದು ಹೇಳಿದರು."
 
ನಮ್ಮ ಪ್ರಯಾಣ ಮುಗಿದ ನಂತರ ನಾವು ಕೆಳಗೆ ಇಳಿದಾಗ ವ್ಯಕ್ತಿಯನ್ನು ನಾನು ಹಸ್ತಲಾಘವ ಮಾಡುತ್ತಾ ನಿಮ್ಮೊಂದಿಗೆ ಮಾತನಾಡಿ ತುಂಬಾ ಸಂತೋಷವಾಯಿತು. ಅಂದ ಹಾಗೆ ನನ್ನ ಹೆಸರು ಅಮಿತಾಭ್ ಬಚ್ಚನ್' ಎಂದು ಹೇಳಿದೆ.
 
ವ್ಯಕ್ತಿಯು ಕೈಕುಲುಕುತ್ತಾ ಮುಗುಳ್ನಗುತ್ತಾ ಹೇಳಿದರು. "ಧನ್ಯವಾದಗಳು..ನಾನು ಜೆಆರ್‌ಡಿ ಟಾಟಾ (ಟಾಟಾ ಕಂಪನಿಯ
ಮಾಲೀಕ) ಎಂದು ಹೇಳಿದರು."
 
ಅಂದು ನಾನೊಂದು ಮಾತು ಕಲಿತೆ ಅದೇನೆಂದರೆ "ನೀನು ಎಷ್ಟೇ ದೊಡ್ಡವನಾಗಿದ್ದರೂ ನಿನಗಿಂತ ದೊಡ್ಡವನು ಇದ್ದೇ ಇರುತ್ತಾರೆ" ಎಂಬುದು.
 
ಅಹಂಕಾರಕ್ಕೆ ಬೆಲೆ ಇಲ್ಲ, ಹಾಗಾಗಿ ವಿನಯವಂತರಾಗಿ ಬಾಳೋಣ ... -ಅಮಿತಾಬ್ ಬಚ್ಚನ್

saving score / loading statistics ...